ಸೂಕ್ಷ್ಮಜೀವಿ ಅಥವಾ ವೈರಸ್‍ಗಳನ್ನು ಕೊಂದು ಇಲ್ಲವೇ ದುರ್ಬಲೀಕರಿಸಿ ತಯಾರಿಸಿದ ದ್ರವಪದಾರ್ಥ (ವ್ಯಾಕ್ಸಿನ್). ಇದನ್ನು ಚುಚ್ಚುಮದ್ದಾಗಿ ರಕ್ತಪರಿಚಲನ ವ್ಯವಸ್ಥೆಗೆ ಹೊಗಿಸಿದಾಗ ಅದರಲ್ಲಿ ಪ್ರತಿಕಾಯಗಳು ಜನಿಸಿ ವ್ಯಕ್ತಿಗೆ ಆಯಾ ರೋಗದ ಎದುರು ರಕ್ಷೆ ಒದಗಿಸುತ್ತವೆ.
	
ಲಸಿಕೆ ಹಾಕುವುದು: ಯಾವುದೇ ಸಾಂಕ್ರಾಮಿಕ ರೋಗ ದೇಹಕ್ಕೆ ತಟ್ಟದಂತೆ ರಕ್ಷಣೆ ಒದಗಿಸಲು  ಲಸಿಕೆ  ಚುಚ್ಚುವ  ಪ್ರಕ್ರಿಯೆ  (ವ್ಯಾಕ್ಸಿನೇಶನ್).  ಮೂಲತಃ  ಸಿಡುಬು  ಅಂಟದಂತೆ ರಕ್ಷಣೆ ಒದಗಿಸಲು  ಲಸಿಕೆ  ಹಾಕುವ  ತಂತ್ರವನ್ನು ಯಶಸ್ವಿಯಾಗಿ ಬಳಸಲಾಯಿತು (1885ರ ಸುಮಾರಿಗೆ). 

(ನೋಡಿ- ಪಾಸ್ತರ್,ಲೂಯಿ) (1822-95). ತದನಂತರದ ದಿನಗಳಲ್ಲಿ ಬೇರೆ ಬೇರೆ ಅಂಟುರೋಗಗಳನ್ನು ತಡೆಯಲು ಮುಂದಾಗಿಯೇ ಲಸಿಕೆ ಹಾಕುವ ತಂತ್ರಗಳು ಬಳಕೆಗೆ ಬಂದಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ